Sunday, August 28, 2011

ಪ್ರಜೀವಾ ಒಂಭತ್ತನೆಯ ವರ್ಷದಲ್ಲಿ!


ಪ್ರಜೀವಾ ಒಂಭತ್ತನೆಯ ವರ್ಷದಲ್ಲಿ!
ಆತ್ಮೀಯ ಬಂಧು,
             ಪ್ರಜೀವಾ ಮಾಸಪತ್ರಿಕೆಯು ತನ್ನ ಯಶಸ್ವೀ ಪ್ರಕಟಣೆಯ ಒಂಭತ್ತನೆಯ ವರ್ಷದಲ್ಲಿದೆ.
ಪ್ರಾಕೃತಿಕ ಆರೋಗ್ಯ ಸಾಧನೆಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತಾಗಿ ಕರುನಾಡಿನ ಎಲ್ಲೆಡೆ ಮಾತ್ರವಲ್ಲದೆ ದೇಶದ ಹಲವೆಡೆಗಳಲ್ಲಿರುವ ಸುಮಾರು ೪,೦೦೦ ಮನೆಗಳ ಸಹಸ್ರಾರು ಸಹೃದಯ ಸಜ್ಜನರ ಮನಗಳನ್ನು ಈವರೆಗೆ ಪ್ರಜೀವಾ ತಲುಪಿದೆ!

ವರ್ಷ ೨೦೧೩ ರಲ್ಲಿ ಪ್ರಜೀವಾವು ಪ್ರತೀ ತಿಂಗಳು ೪೮ ಪುಟಗಳಲ್ಲಿ ಪ್ರಕಟವಾಗುತ್ತಾ ಹೆಚ್ಚು ಹೆಚ್ಚು ಜನಮನ್ನಣೆ ಗಳಿಸುತ್ತಿದೆ.

                
       ಪ್ರಜೀವಾದ ೨೦೧೩ ನವಂಬರ - ದಶಂಬರ ಸಂಯುಕ್ತ ಸಂಚಿಕೆ ಇದೀಗ ಸಜ್ಜಾಗುತ್ತಿದೆ.
               
ಮುಂದೆ - ಪ್ರಜೀವಾದ ಪ್ರಥಮ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವಾಗ ಡಾ|| ಪಳ್ಳತ್ತದ್ಕ ಕೇಶವ ಭಟ್ಟರು ಆಶಿಸಿದಂತೆ - ವಿವಿಧ ಭಾಷೆಗಳಲ್ಲಿ ಪ್ರಜೀವಾದ ಆವೃತ್ತಿಗಳನ್ನೂ ಪ್ರಕಟಿಸುವ ಬಗೆಗೆ ಚಿಂತಿಸಬಹುದು.
ಸರ್ವೇ ಭವಂತು ಸುಖಿನಃ