Saturday, December 7, 2013

ಸುರುಳಿ



ಸುರುಳಿ
            ಪ್ರಜೀವಾದ ಪ್ರಧಾನ ಸಲಹೆಗಾರರಾಗಿದ್ದು ನಮ್ಮನ್ನು ಹಲವು ರೀತಿಗಳಲ್ಲಿ ಬೆಂಬಲಿಸುತ್ತಾ, ಪತ್ರಿಕೆಗೆ ಒಂದು ಭದ್ರವಾದ ತಾತ್ವಿಕ ಅಡಿಪಾಯ ಹಾಕಿಕೊಟ್ಟಿದ್ದ ವಿಶ್ವಚೇತನ, ಮಹಾನ್ ಮೇಧಾವಿ, ಬಹುಭಾಷಜ್ಞ, ಲಕ್ಷಾಂತರ ಸಸ್ಯಗಳನ್ನರಿತ ಸಸ್ಯವಿಜ್ಞಾನಿ, ನಾಡೀಶಾಸ್ತ್ರ ಪರಿಣತ, ಪ್ರಕೃತಿ ಚಿಕಿತ್ಸಕ, ಮಿಲಿಯಾಂತರ ಜನರಿಗೆ ಪ್ರಾಕೃತಿಕ ಆರೋಗ್ಯದ ಬೆಳಕನ್ನಿತ್ತ ಮಾನವತಾವಾದಿ, ಸರಳ ಸಜ್ಜನ ಡಾ|| ಪಳ್ಳತ್ತದ್ಕ ಕೇಶವ ಭಟ್ಟರು ೨೦೧೦ ಜುಲೈ ೨೫ ರಂದು ಅಮೆರಿಕಾದಲ್ಲಿ ತಮ್ಮ ೭೧ ನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಇದು ವಿಶ್ವದ ಮಾನವತೆಗೇ ತುಂಬಲಾರದ ನಷ್ಟ. ಪ್ರಜೀವಾ ಬಳಗಕ್ಕಂತೂ ಭಾರೀ ಆಘಾತ.
ಇಂತಹ ಅತಿವಿರಳ ಸಾಧಕರ ಜೀವನ ಸಾಧನೆಗಳನ್ನು ಅವರೊಡನೆ ಒಡನಾಡಿದ ಬಂಧು ಬಾಂಧವರು, ಸಹಪಾಠಿಗಳು, ಸಹಚರಿಗಳು, ಅವರಿಂದ ಉಪಕೃತರಾದವರು ಇವರೆಲ್ಲಾ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಬರೆದ ಮನೋಜ್ಞ ಲೀಖನಗಳುಳ್ಳ ಅಮೂಲ್ಯ ಸಂಸ್ಮರಣ ಸಂಪುಟ ಸುರುಳಿಯು ಡಾ|| ಪಿ.ಕೆ.ಭಟ್ಟರ ಮಗಳಾದ ಡಾ|| ಸುಮಾ ಪ್ರಮೋದ್ ರವರ ಸಮರ್ಥ ಸಂಪಾದಕತ್ವದಲ್ಲಿ ೧೬ ವರ್ಣಮಯ ಪುಟಗಳಲ್ಲಿ ವರ್ಣಮಯವಾದ ಅಪರೂಪದ ಚಿತ್ರಗಳನ್ನೊಳಗೊಂಡು ೪೦೮ ಪುಟಗಳಲ್ಲಿ ಪ್ರಕಟವಾಗಿದೆ. (ಬೆಲೆ ರೂ.೨೪೦.) ಇದು ಒಂದು ಸುಂದರ, ಸ್ಮರಣೀಯ ಕಾರ್ಯಕ್ರಮದಲ್ಲಿ ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ೧೧ ಅಗೋಸ್ತು ೨೦೧೧ ರಂದು ಬಿಡುಗಡೆಯಾಗಿದೆ.

No comments:

Post a Comment